Live

Broadcasting Time Morning  6 AM-9AM / Afternoon 12 PM to 3PM / Evening 6 PM to 9PM

90.8 FM Live - Play

 

 
IMG_4786

ನಮ್ಮ ಪ್ರಸಾರದ ಕಾರ್ಯಕ್ರಮಗಳ ವಿವರ:

ಸಾಹಿತ್ಯ ಸುಧೆ : ಪ್ರತಿ ಭಾನುವಾರ ಪ್ರಸಾರವಾಗುವ ಈ ಕಾರ್ಯಕ್ರಮದ ಉದ್ದೇಶ ಸಾಹಿತ್ಯದ ಬಗೆಗೆ ಕೇಳುಗರಲ್ಲಿ ಅರಿವು ಮೂಡಿಸುವುದು ಮತ್ತು ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವುದು. ಈ ಕಾರ್ಯಕ್ರಮವನ್ನು ತುಮಕೂರಿನ ಎಂಪ್ರೆಸ್‍ ಸರ್ಕಾರಿ ಬಾಲಕಿಯರ ಪೌಢ ಶಾಲಾ ಶಿಕ್ಷಕರಾದ ಎಸ್. ಕೃಷ್ಣಪ್ಪ ನಡೆಸಿಕೊಡುತ್ತಾರೆ.

ಪ್ರತಿಭಾ ಕಿರಣ : ಪ್ರತಿಭಾವಂತರನ್ನು ಪರಿಚಯಿಸುವ ಕಾರ್ಯಕ್ರಮ.

ಇಂಗ್ಲೀಷ್ ಟೈಮ್ : ರೇಡಿಯೋ ಸಿದ್ಧಾರ್ಥದ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಸುಮಾರು 500 ಸಂಚಿಕೆಗಳು ವಿವಿಧ ಪ್ರಾಧ್ಯಾಪಕರಿಂದ ಪೂರೈಸಲ್ಪಟ್ಟು, ಇನ್ನೂ ಹೆಚ್ಚು ಕೇಳುಗರ ಅಪೇಕ್ಷೆಯ ಮೇರೆಗೆ ಮುಂದುವರೆಯುತ್ತಿದೆ.  ಆಡುಮಾತಿನ ಇಂಗ್ಲೀಷ್ ಕಲಿಕೆಗಾಗಿ ಸರಳ ವ್ಯಾಕರಣ ಆಧಾರಿತ ಭಾಷಾಕಲಿಕೆಯನ್ನು ಪ್ರತಿ ದಿನ ಸೋಮವಾರ ದಿಂದ ಶುಕ್ರವಾರದ ವರೆಗೆ ಡಾ. ಎನ್. ನಾಗಭೂಷಣ್ ಕಲಿಸಿಕೊಡುತ್ತಾರೆ.

ಶಿಕ್ಷಣ ವಾಣಿ : ವಿದ್ಯಾರ್ಥಿಸಮೂಹ ಸೇರಿದಂತೆ ಜನಸಾಮಾನ್ಯರಿಗೆ ಜೀವನ ಶಿಕ್ಷಣದ ಮೌಲ್ಯದ ಕುರಿತಾಗಿ ಬೋಧನೆ; ಈ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡುವವರು ಹೊಸಕೆರೆ ರಿಜ್ವಾನ್ ಬಾಷಾ. ತುಮಕೂರಿನ ಎಂಪ್ರೆಸ್‍ಸರ್ಕಾರಿ ಬಾಲಕಿಯರ ಪೌಢ ಶಾಲೆಯಲ್ಲಿ ಶಿಕ್ಷಕರು.

ಕೃತಿ ದರ್ಶನ : ತುಮಕೂರು ಜಿಲ್ಲೆಯ ಬರಹಗಾರರು ಬರೆದು ಪ್ರಕಟಿಸುವ ಹೊಸ ಕೃತಿಗಳ ಪರಿಚಯ ಮತ್ತು ವಿಮರ್ಶೆ; ಈ ಕಾರ್ಯಕ್ರಮವನ್ನು ತುಮಕೂರಿನ ಎಂಪ್ರೆಸ್‍ ಸರ್ಕಾರಿ ಬಾಲಕಿಯರ ಪೌಢ ಶಾಲಾ ಶಿಕ್ಷಕರಾದ ಎಸ್. ಕೃಷ್ಣಪ್ಪ ನಡೆಸಿಕೊಡುತ್ತಾರೆ.

ಜೀವನ ಜೋಪಾನ : ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ  ಹೆಚ್.ಐ.ವಿ /ಏಡ್ಸ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ.

ಕೃಷಿ ಕಣಜ : ಕೃಷಿ ಕ್ಷೇತ್ರದ ಬೆಳವಣಿಗೆ ಕುರಿತು ರೈತರಿಗಾಗಿ ಕಾರ್ಯಕ್ರಮ. ಕೃಷಿ ತಜ್ಞರು, ಕೃಷಿ, ರೇಷ್ಮೆ ಕೃಷಿ ಅಧಿಕಾರಿUಳಿಂದ ಮಾಹಿತಿ ಮತ್ತು ರೈತರೊಡನೆ ಸಂದರ್ಶನ ಕಾರ್ಯಕ್ರಮ ನಡೆಸುವುದು ಇದರ ಉದ್ದೇಶ. ರೈತ ಬಾಂಧವರು,ಕೃಷಿ ಅಧಿಕಾರಿಗಳು,ಪ್ರಗತಿಪರ ಕೃಷಿಕರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಕಾಲೇಜು ಕಲರವ : ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳು.

ಗುಬ್ಬಿಯ ಗೂಡು : ಮಕ್ಕಳೇ ನಡೆಸುವ ವೈವಿಧ್ಯಮಯ ಕಾರ್ಯಕ್ರಮ.

ಜಾನಪದ ಜಗತ್ತು : ನಶಿಸಿ ಹೋಗುತ್ತಿರುವ ಜನಪದ ಹಾಡು ಮತ್ತು ಸಾಹಿತ್ಯವನ್ನು ಉಳಿಸಿ ಅದನ್ನು ಪ್ರೋತ್ಸಾಹಿಸುವ ಉದ್ದೇಶದ ಈ ಕಾರ್ಯಕ್ರಮವನ್ನು ಗ್ರಾಮೀಣ ಜಾನಪದ ಕಲಾವಿದರು ನಡೆಸಿಕೊಡುತ್ತಾರೆ.

ನಮ್ಮ ಆರೋಗ್ಯ : ನಮ್ಮ ಕೇಳುಗರಲ್ಲಿ ಆರೋಗ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ. ವೈದ್ಯರಿಂದ ಸಲಹೆ, ರೋಗಗಳ ಬಗೆಗೆ ಎಚ್ಚರಿಕೆ ಮತ್ತು ಆರೋಗ್ಯ ರಕ್ಷಣೆಗೆ ಕೈಗೊಳ್ಳಬೇಕಾದ ವಿಚಾರಗಳನ್ನು ಕುರಿತು ಉಪನ್ಯಾಸ ಮತ್ತು ಸಂದರ್ಶನ.

ವಿಜ್ಞಾನ ವಿಸ್ಮಯ : ಕೇಳುಗರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವುದು ಇದರ ಉದ್ದೇಶ. ಈ ಕಾರ್ಯಕ್ರಮವನ್ನು ಶಿಕ್ಷಕರು ಹಾಗು ವೈಜ್ಞಾನಿಕ ಚಿಂತಕರಾದ ಡಾ. ಎಸ್. ನಾಗಭೂಷಣ್ ಅವರು ನಡೆಸಿಕೊಡುತ್ತಾರೆ.

ಗೀತ ವೈಭವ : ಸಮುದಾಯದಲ್ಲಿನ ಪ್ರತಿಭಾವಂತ ಗಾಯಕ -ಗಾಯಕಿಯರು ಸ್ವತಃ ಸುಮಧುರ ಹಾಡುಗಳನ್ನು ಹಾಡಿ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ಅಮಲಿನ ಕತೆಗಳು : ಜನಸಾಮಾನ್ಯರಿಂದ ದುಶ್ಚಟಗಳನ್ನು ಮುಕ್ತಗೊಳಿಸುವುದಕ್ಕಾಗಿರುವ ಸರಣಿ ಕಾರ್ಯಕ್ರಮ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಹಕಾರದೊಡನೆ ಕಾರ್ಯಕ್ರಮ ನಿರ್ವಾಹಕಿ ರಶ್ಮಿ ಅಮ್ಮೆಂಬಳ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ.

ವಿಶೇಷ ಸಂದರ್ಶನ: ಶ್ರೀ ಸಿದ್ಧಾರ್ಥ ತಾಂತ್ರಿಕ ಸಂಸ್ಥೆ ಮತ್ತು ಮ್ಯಾನೇಜ್‍ಮೆಂಟ್ ಹಾಗು ಮಾಧ್ಯಮ ಕೋರ್ಸುಗಳ ವಿಭಾಗಗಳಿಂದ ನಿರಂತರವಾಗಿ ನಡೆಯುವ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಬರುವ ಆಯ್ದ ಕೆಲವು ಗಣ್ಯರನ್ನು ಹಾಗೂ ಸಮುದಾಯದಲ್ಲಿನ ವಿಶೇಷ ಸಾಧಕರನ್ನು ನಮ್ಮ ನಿಲಯಕ್ಕೆ ಆಮಂತ್ರಿಸಿ ನಡೆಸುವ ಸಂದರ್ಶನ .

ಕಾನೂನು ಅರಿವು: ಕೇಳುಗರಿಗಾಗಿ ನಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಿರುವ ಕಾನೂನು ತಿಳುವಳಿಕೆ ಕುರಿತ ಕಾರ್ಯಕ್ರಮ ಅನುಭವಿ ವಕೀಲರಿಂದ.

ತುಮಕೂರು ಪ್ರದಕ್ಷಿಣೆ: ತುಮಕೂರು ನಗರದಲ್ಲಿ ದಿನ ನಿತ್ಯ ನಡೆಯುವ ಕೆಲವು ಕಾರ್ಯಕ್ರಮಗಳ ವರದಿ.

ಕೇಳ್ರಪ್ಪೋ ಕೇಳ್ರಿ: ವಿಶೇಷ ಪ್ರಕಟಣೆಗಳಿಗಾಗಿ.